ಬೆಂಗಳೂರು : ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದ ಪ್ರಯಾಣಿಕರಿಗೆ ಗುಡ್ನ್ಯೂಸ್ ಸಿಕ್ಕಿದೆ.ಪೀಣ್ಯ ಫ್ಲೈಓವರ್ ರಿಪೇರಿ ಕಾರ್ಯ ಅಂತಿಮ ಹಂತದಲ್ಲಿದೆ. ಇನ್ನೊಂದು ವಾರದಲ್ಲಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.ಡಿಸೆಂಬರ್ ಕೊನೆಯ ವಾರದ ವೇಳೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿನ ನೆಲಮಂಗಲ-ಗೊರಗುಂಟೆಪಾಳ್ಯ ಫ್ಲೈಓವರ್ನ 102-103ನೇ ಪಿಲ್ಲರ್ ನಡುವಿನ ಸ್ಲಾಬ್ಗಳಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಕಂಡುಬಂದಿತ್ತು.ಅದನ್ನ ಸರಿಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫ್ಲೈಓವರ್ನ ಸಂಚಾರವನ್ನ ನಿರ್ಬಂಧ ಮಾಡಿತ್ತು. ಪ್ರಾರಂಭದಲ್ಲಿ ಒಂದೇ ವಾರಕ್ಕೆ ದುರಸ್ಥಿ ಕಾರ್ಯ