ನವದೆಹಲಿ : 2021-22ರ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಠೇವಣಿಯ ಮೇಲೆ ಒದಗಿಸುವ ಬಡ್ಡಿದರವನ್ನು ಶೇ. 8.1ಕ್ಕೆ ಇಳಿಕೆ ಮಾಡುವ ನಿರ್ಧಾರಕ್ಕೆ ಸರ್ಕಾರ ಅನುಮೋದನೆ ನೀಡಿದೆ.ಇದು ಕಳೆದ 4 ದಶಕಗಳಲ್ಲೇ ಕನಿಷ್ಠ ಬಡ್ಡಿದರವೆನಿಸಿದೆ. ಇದು ಇಪಿಎಫ್ನ ಬಡ್ಡಿದರವನ್ನೇ ಅವಲಂಬಿಸಿರುವ ಸುಮಾರು 5 ಕೋಟಿ ಜನರಿಗೆ ಹೊಡೆತ ನೀಡಲಿದೆ.ಈ ವರ್ಷ ಮಾಚ್ರ್ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು, ಇಪಿಎಫ್ ಠೇವಣಿಗಳ ಮೇಲೆ ಒದಗಿಸುವ ಬಡ್ಡಿದರವನ್ನು ಶೇ.8.5ರಿಂದ ಶೇ.8.1ಗೆ ತಗ್ಗಿಸಲು ನಿರ್ಧಾರ ಮಾಡಿತ್ತು.