ಬೆಂಗಳೂರು: ಜೆಡಿಎಸ್ ನಲ್ಲೂ ಇದೀಗ ಖಾತೆ ಹಂಚಿಕೆ ವಿಚಾರವಾಗಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಸಿದ್ದರಾಮಯ್ಯ ಅವರಿಗೇ ಸೋಲುಣಿಸಿದ ಜಿಡಿ ದೇವೇಗೌಡ ಇದೀಗ ಲೋಕೋಪಯೋಗಿ ಖಾತೆಗಾಗಿ ಪಟ್ಟು ಹಿಡಿದಿದ್ದಾರೆ.ಈ ಮೊದಲು ಜಿಡಿ ದೇವೇಗೌಡ ಕಂದಾಯ ಅಥವಾ ನೀರಾವರಿ ಇಲಾಖೆ ನೀಡುವಂತೆ ಕೇಳಿದ್ದರು. ಆದರೆ ಇವೆರಡೂ ಕಾಂಗ್ರೆಸ್ ಪಾಲಾಗಿವೆ. ಹೀಗಾಗಿ ಇದೀಗ ಲೋಕೋಪಯೋಗಿ ಇಲಾಖೆ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.ಆದರೆ ಲೋಕೋಪಯೋಗಿ ಖಾತೆಗಾಗಿ ಈಗಾಗಲೇ ಎಚ್ ಡಿ ರೇವಣ್ಣ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸ್ವತಃ ಜೆಡಿಎಸ್