ಬೆಂಗಳೂರು : ಒಟ್ಟು 129 ಪುಟಗಳ ಹೈಕೋರ್ಟ್ ತೀರ್ಪಿನಲ್ಲಿ ಹಿಜಬ್ ವಿವಾದದ ಹಿಂದೆ ಕಾಣದ ಕೈಗಳ ಕೈವಾಡವಿರುವ ಬಗ್ಗೆಯೂ ಪೂರ್ಣ ಪೀಠ ಶಂಕೆ ವ್ಯಕ್ತಪಡಿಸಿದೆ.ಸಮಾಜದ ಸಾಮರಸ್ಯ ಕದಡುವ ಹುನ್ನಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. 126 ಮತ್ತು 127ನೇ ಪುಟದಲ್ಲಿ ದಿಢೀರ್ ಆಗಿ ಈ ವಿವಾದ ಯಾಕೆ ಸೃಷ್ಟಿಯಾಯಿತು ಎಂದು ಹೈಕೋರ್ಟ್ಪ್ರಶ್ನಿಸಿದೆ. 2004ರಿಂದಲೂ ಸಮವಸ್ತ್ರ ಕಡ್ಡಾಯ ಆದೇಶವಿದ್ದು ಈ ವಿವಾದ ಇದ್ದಕ್ಕಿದ್ದಂತೆ ಚಾಲ್ತಿಗೆ ಬಂದಿದ್ಯಾಕೆ ಎಂದು ಪ್ರಶ್ನಿಸಿದೆ. ಸಮಾಜದಲ್ಲಿ ಶಾಂತಿ ಕದಡುವ