ಬೆಂಗಳೂರು: ಇಂದು ಸಂಜೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಎಚ್ ಡಿ ಕುಮಾರಸ್ವಾಮಿ ನಾಡದೇವತೆಗೇ ಪೂಜೆ ಮಾಡದೇ ಇದ್ದರೆ ಹೇಗೆ?ನಿನ್ನೆಯಿಡೀ ಧರ್ಮಸ್ಥಳ, ಶೃಂಗೇರಿ ದೇವರಿಗೆ ಕೈ ಮುಗಿದು ಬಂದ ಕುಮಾರಸ್ವಾಮಿ ಇಂದು ಬೆಳಿಗ್ಗೆಯೇ ನಾಡದೇವತೆ ಚಾಮುಂಡೇಶ್ವರಿಗೆ ನಮಿಸಲು ಲಲಿತ್ ಮಹಲ್ ಹೆಲಿಪ್ಯಾಡ್ ಗೆ ಬಂದಿಳಿದಿದ್ದಾರೆ.ಕುಮಾರಸ್ವಾಮಿ ಜತೆಗೆ ಪತ್ನಿ ಅನಿತಾ ಕುಮಾರಸ್ವಾಮಿ ಕೂಡಾ ಇದ್ದಾರೆ. ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ರಾಮನಗರದ ದೇವಾಲಯಕ್ಕೂ ಭೇಟಿ ನೀಡಿ ಬಳಿಕ ಪ್ರಮಾಣ