ಬೆಂಗಳೂರು: ಆಪರೇಷನ್ ಕಮಲ ಭೀತಿಯಿಂದ ತಮ್ಮ ಪಕ್ಷದ ಶಾಸಕರನ್ನು ರಕ್ಷಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ಗುಪ್ತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.ಸದ್ಯಕ್ಕೆ ಎರಡೂ ಪಕ್ಷದ ಶಾಸಕರೂ ಹೈದರಾಬಾದ್ ನ ಐಷಾರಾಮಿ ಹೋಟೆಲ್ ಗಳಾದ ತಾಜ್ ಕೃಷ್ಣಾ ಮತ್ತು ನೊವೊಟೆಲ್ ನಲ್ಲಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಕರೆದೊಯ್ಯಲು ಸ್ವತಃ ಸಂಸದ ಡಿಕೆ ಸುರೇಶ್ ತೆರಳಿದ್ದಾರೆ.ಆದರೆ ಜೆಡಿಎಸ್ ಶಾಸಕರ ಜತೆಗೆ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ತೆರಳಿಲ್ಲ. ಮೊದಲು ಜೆಡಿಎಸ್ ಶಾಸಕರನ್ನು ಕೇರಳಕ್ಕೆ ಎಚ್ ಡಿಕೆ