ತಿರುವನಂತಪುರಂ: ಕೇರಳ ಮತ್ತು ಕೊಡಗಿನಲ್ಲಿ ಭಾರೀ ಮಳೆಯಿಂದಾಗಿ ಸಾವಿರಾರು ಜನರ ಬದುಕು ದುಸ್ತರವಾಗಿದೆ. ಮನೆ ಮಠ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿದ್ದಾರೆ.ಕೇರಳದಲ್ಲಿ ಸದ್ಯಕ್ಕೆ ವರುಣ ಕೊಂಚ ಬಿಡುವು ತೋರಿದರೂ ಮತ್ತೊಂದು ಭೀತಿ ನಿರಾಶ್ರಿತರ ಶಿಬಿರದಲ್ಲಿರುವ ಸಂತ್ರಸ್ತರನ್ನು ಕಾಡುತ್ತಿದೆ. ಅದು ಸಾಂಕ್ರಾಮಿಕ ರೋಗದ ಭೀತಿ.ಸಾಮಾನ್ಯವಾಗಿ ಪ್ರವಾಹದ ನಂತರ ಜನರು ಸಂಕಷ್ಟಕ್ಕೀಡಾಗುವುದು ಇದೇ ಕಾರಣಕ್ಕೆ. ಇದೀಗ ಕೇರಳದ ನಿರಾಶ್ರಿತರ ಶಿಬಿರದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ಕೆಲವೆಡೆ ಚಿಕನ್ ಪಾಕ್ಸ್ ನಂತಹ