ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದಲೇ ಭಾರೀ ಮಳೆಯಾಗಿದ್ದು, ಮಂಗಳೂರು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ದೇರೆಬೈಲ್, ಮಾಲೆಮಾರ್, ಜನವಸತಿ ಪ್ರದೇಶಕ್ಕೆ ರಾಜಕಾಲುವೆಯ ನೀರು ನುಗ್ಗಿದ್ದು ಹಲವು ಮನೆಯೊಳಗೂ ನೀರು ನುಗ್ಗಿದೆ.ರಸ್ತೆಯಲ್ಲಿ ನಿಂತಿರುವ ನೀರು, ವಾಹನ ಸವಾರರ ಪರದಾಟ ನಡೆಸಿದ್ದಾರೆ. ಮನೆಯೊಳಗಿರುವ ಸಾಮಾಗ್ರಿಗಳು ನೀರಿನಲ್ಲಿ ಮುಳುಗಿದ್ದು, ಜನ ಪಾಲಿಕೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾದ್ಯಂತ