ವಾಷಿಂಗ್ಟನ್ : ಮೆಟಾ ಮಾಲೀಕತ್ವದ ವಾಟ್ಸಪ್ ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ತನ್ನ ಫೀಚರ್ಗಳನ್ನು ಒಂದಾದಮೇಲೊಂದರಂತೆ ಅಭಿವೃದ್ಧಿಪಡಿಸುತ್ತಲೇ ಇದೆ. ಇದೀಗ ಅಪ್ಲಿಕೇಶನ್ ದಿನಾಂಕದ ಮೂಲಕ ಸಂದೇಶಗಳನ್ನು ಹುಡುಕುವ ಫೀಚರ್ ಅನ್ನು ತರುವಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿಯಾಗಿದೆ.ವಾಟ್ಸಪ್ ಈಗಾಗಲೇ ತನ್ನ ಬೀಟಾ ಆವೃತ್ತಿಯಲ್ಲಿ ಈ ಫೀಚರ್ ಅನ್ನು ಪರೀಕ್ಷಿಸಲು ಬಿಡುಗಡೆಗೊಳಿಸಿದೆ. ‘ಸರ್ಚ್ ಮೆಸೇಜ್ ಬೈ ಡೇಟ್ ಎಂದು ಬರೆಯಲಾದ ಇದರ ಸ್ಕ್ರೀನ್ಶಾಟ್ ಅನ್ನೂ ವೆಬ್ಸೈಟ್ ಹಂಚಿಕೊಂಡಿದೆ.ವರದಿಗಳ ಪ್ರಕಾರ ವಾಟ್ಸಪ್ ಈ ಫೀಚರ್