ಬೆಂಗಳೂರು : ಈ ವರ್ಷಾಂತ್ಯದ ಒಳಗಡೆ ಬಿಬಿಎಂಪಿ ಚುನಾವಣೆ ನಡೆಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಮೀಸಲಾತಿ ಸರಿಪಡಿಸಲು 16 ವಾರ ಬೇಕೆಂದ ಸರ್ಕಾರದ ವಿರುದ್ಧ ಗರಂ ಆದ ಕೋರ್ಟ್ ಇಷ್ಟು ಸಮಯ ಕೇಳಿದರೆ ತಕ್ಷಣ ಚುನಾವಣೆಗೆ ಆದೇಶಿಸಬೇಕಾದೀತು ಎಂದು ಚಾಟಿ ಬೀಸಿದೆ. ಬಿಬಿಎಂಪಿ ಮೀಸಲಾತಿ ವಿಚಾರವಾಗಿ ಮೀಸಲಾತಿ ಸರಿಪಡಿಸಲು 4 ತಿಂಗಳು ಕಾಲಾವಕಾಶ ಬೇಕೆಂದು ಸರ್ಕಾರ ಕೋರ್ಟ್ಗೆ ಮನವಿ ಸಲ್ಲಿಸಿತ್ತು. ಬಿಬಿಎಂಪಿ ಮೀಸಲಾತಿ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ