ನವದೆಹಲಿ : ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕಡೆಗೂ ಅಂತ್ಯವಾಗಿದೆ.ಕಳೆದ ಹತ್ತು ದಿನಗಳಿಂದ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಗುಪ್ತಾ ನೇತೃತ್ವದ ದ್ವಿ ಸದಸ್ಯ ಪೀಠ ತೀರ್ಪು ಕಾಯ್ದಿರಿಸಿದೆ.ಇಂದು ಬೆಳಗ್ಗೆ ವಿಚಾರಣೆ ಆರಂಭವಾಗುತ್ತಲೇ ಅರ್ಜಿದಾರರ ವಕೀಲ ಹುಜೇಫ್ ಅಹ್ಮದ್ ಮತ್ತೆ ವಾದ ಮಂಡಿಸಲು ನಿಂತರು. ಇದಕ್ಕೆ ಅಸಹನೆ ವ್ಯಕ್ತಪಡಿಸಿದ ನ್ಯಾಯಪೀಠ, ಬೇಗ ವಾದ ಮುಗಿಸಿ.ಕೊನೆಗೆ ನಾವು ನಿಮ್ಮೆಲ್ಲರ ವಾದ ಆಲಿಸಿದ್ದೇವೆ.