ಚಿಕ್ಕಮಗಳೂರು : ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಕಾಫಿನಾಡು ಚಿಕ್ಕಮಗಳೂರಿನ ಹಲವೆಡೆ ಭೂಕುಸಿತ, ಗುಡ್ಡ ಕುಸಿತಗಳು ಸಂಭವಿಸಿದೆ.ಚಂದ್ರದ್ರೋಣ ಪರ್ವತ ಸಾಲಿನ ಕೆಲ ಪ್ರವಾಸಿ ಸ್ಥಳಗಳಿಗೆ ಜಿಲ್ಲಾಡಳಿತ ಕೆಲವೊಂದು ನಿರ್ಬಂಧ ಹೇರಿದೆ.1,200 ಕೆ.ಜಿ ಮೇಲ್ಪಟ್ಟ ವಾಹನಗಳಿಗೆ ನಿಷೇಧ ಹೇರಲಾಗಿದೆ. ಬೆಳಗ್ಗೆ 6-9 ಹಾಗೂ ಮಧ್ಯಾಹ್ನ 2-4 ಗಂಟೆ ವರೆಗೆ ಮಾತ್ರವೇ ಪ್ರಯಾಣಕ್ಕೆ ಅವಕಾಶವಿರುತ್ತದೆ. ತಲಾ 150 ವಾಹನಗಳಂತೆ 300 ವಾಹನಗಳಿಗೆ ಮಾತ್ರವೇ ಅವಕಾಶವಿರುತ್ತದೆ. ಮುಳ್ಳಯ್ಯನಗಿರಿ, ದತ್ತಪೀಠ, ಝರಿ ಪಾಲ್ಸ್, ಮಾಣಿಕ್ಯಧಾರ ಪ್ರವಾಸಿ ಸ್ಥಳಗಳಿಗೆ