ಕೊರೊನಾ ಬಂದು ಏನಾಗಿ ಬಿಡುತ್ತೊ ಅಂತ ಜನರು ಆಸ್ಪತ್ರೆಗಳತ್ತ ಓಡಿಬರ್ತಿಲ್ಲ. ಹಲವು ಮಂದಿ ಮನೆಯಲ್ಲೇ ಪ್ರತ್ಯೇಕವಾಗಿ ಇದ್ದುಕೊಂಡೆ ಕೋವಿಡ್ 19 ನಿಂದ ಗುಣಮುಖರಾಗ್ತಿದ್ದಾರೆ. ಶೇಕಡಾ 63%ರಷ್ಟು ಮಂದಿ ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆದುಕೊಳ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ1,52,456 ಮಂದಿ ಕೊರೊನಾ ಪೆಷೆಂಟ್ಗಳು ಮನೆಯಲ್ಲೇ ಐಸೋಲೇಷನ್ ಆಗಿದ್ದಾರೆ. ಅದರಲ್ಲೂ ಹೆಚ್ಚಾಗಿ ಬೆಂಗಳೂರಿನ ಜನರೇ ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೀತಿದ್ದಾರೆ.ನಿತ್ಯ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು