ನವದೆಹಲಿ : ಒಮಿಕ್ರಾನ್ ಮತ್ತು ಕೊರೊನಾ 3ನೇ ಅಲೆ ಆತಂಕ ಹಿನ್ನೆಲೆ ಮೂರನೇ ಡೋಸ್ ಲಸಿಕೆ ಬಗ್ಗೆ ಚರ್ಚೆ ನಡಿಯುತ್ತಿದೆ. ಈ ಹೊತ್ತಲ್ಲಿಯೇ ಬೂಸ್ಟರ್ ಡೋಸ್ಗೆ ಸಂಬಂಧಿಸಿದ ವರದಿಯನ್ನು ಸಂಸದೀಯ ಸಮಿತಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಲ್ಲಿಸಿದೆ. ಅದರ ಪ್ರಕಾರ, ತುರ್ತು ಸಂದರ್ಭ ಇದ್ದಲ್ಲಿ ಬೂಸ್ಟರ್ ಡೋಸ್ ನೀಡಲು ಅನುಮತಿ ನೀಡಿದೆ ಎಂದು ವರದಿಯಾಗಿದೆ.ಬೂಸ್ಟರ್ ಡೋಸ್ ತುರ್ತು ಸಂದರ್ಭದಲ್ಲಿ ತೆಗೆದುಕೊಳ್ಳುವ ಮೊದಲು ಕೆಲ ಸಲಹೆಗಳನ್ನು ಪಾಲಸಲು ತಿಳಿಸಿದೆ.