ಬೆಂಗಳೂರು : ತುಮಕೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು 2 ಸಾವಿರ ಮನೆಗಳು ನೆಲಸಮವಾಗಿವೆ. ಬಯಲು ಸೀಮೆಯಲ್ಲಿ ಕಳೆದ 25-30 ವರ್ಷಗಳಿಂದ ಇಂತಹ ಅಕಾಲಿಕ ಅತಿವೃಷ್ಟಿಯಾಗಿರಲಿಲ್ಲ. ಈಗ ಅಂತರ್ಜಲ ಮಟ್ಟ ಕೂಡ ಹೆಚ್ಚಿದೆ. ಅಂತರ್ಜಲ ಮಟ್ಟ ಹೆಚ್ಚಳವನ್ನು ಉನ್ನತೀಕರಣ ಪ್ರಕ್ರಿಯೆ ಎನ್ನಬಹುದು. ವೇಗವಾಗಿ ಭೂಮಿಯಿಂದ ಮೇಲ್ಪದರಕ್ಕೆ ಜಲ ದಬ್ಬಲ್ಪಡುವಾಗ ಅದಕ್ಕೆ ತಕ್ಕ ಪ್ರತಿರೋಧ ಒಡ್ಡಿ ತಡೆಯುವ ಸಾಮರ್ಥ್ಯ ಮನೆಗಳ, ಕಟ್ಟಡಗಳ ತಳಹದಿಗೆ ಇರಬೇಕು. ಆದರೆ, ಅಂತಹ