ಪ್ರತಿಬಾರಿ ಆನ್ಲೈನ್ ಶಾಪಿಂಗ್ ಮಾಡುವಾಗ ನೂರು ಬಾರಿ ಯೋಚಿಸಿ ಮಾಡಬೇಕು. ಯಾಕಂದರೆ ಆನ್ಲೈನ್ ಶಾಪಿಂಗ್ನಲ್ಲೇ ಹೆಚ್ಚು ವಂಚನೆ ನಡೆಯುತ್ತೆ. ಆನ್ಲೈನ್ನಲ್ಲಿ ಕಣ್ಣಿಗೆ ಕಂಡಿದ್ದೆಲ್ಲ ಪರ್ಚೆಸ್ ಮಾಡೋಣ ಅನ್ನಿಸುತ್ತೆ. ಅನ್ನಿಸದ ತಕ್ಷಣ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ, ಬುಕ್ ಮಾಡಿ ಪೇಮೆಂಟ್ ಕೂಡ ಕೊಟ್ಟಿರುತ್ತೀರಾ. ಆದರೆ ಪ್ರಾಡೆಕ್ಟ್ ಮಾತ್ರ ಡೆಲಿವರಿ ಆಗೋದಿಲ್ಲ. ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯ ಪರ್ಸೆನಲ್ ಮಾಹಿತಿಯೂ ಸೋರಿಕೆಯಾಗಿರುತ್ತೆ. ಹೌದು, ಪ್ರತಿದಿನ, ಪ್ರತಿ ಗಂಟೆಗೊಮ್ಮೆ ಆನ್ಲೈನ್ ವಂಚನೆ