ಕೊರೊನಾ ಮೂರನೆ ಅಲೆಯ ಆತಂಕ ಇರುವ ಹಿನ್ನೆಲೆಯಲ್ಲಿ ಸೋಂಕಿನ ಅಪಾಯವನ್ನು ತಗ್ಗಿಸುವ ಸಲುವಾಗಿ ಸುಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯಗಳಿಗೆ ಸಾಕಷ್ಟು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ದೇಶದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಇನ್ನೂ ಜೀವಂತವಾಗಿ ಇರೋದ್ರಿಂದ ಮಹಾಮಾರಿಯಿಂದ ಪಾರಾಗಲು ಇದು ನಿರ್ಣಾಯಕ ಘಟ್ಟವಾಗಿದೆ. ಹೀಗಾಗಿ ಪ್ರವಾಸಿಗರು, ಸ್ಥಳೀಯರು ಹಾಗೂ ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸಿದ್ದಲ್ಲಿ ಮಾತ್ರ ಈ ದೇಶವು ಕೊರೊನಾ ಮೂರನೇ ಅಲೆಯ ಅಪಾಯದಿಂದ ದೂರ ಸರಿಯಲಿದೆ