Widgets Magazine

ಕಾಲಾ ಚಿತ್ರ ರಾಜ್ಯದಲ್ಲಿ ಪ್ರದರ್ಶನ ಮಾಡಿದರೆ ನಾವು ಧಂಗೆ ಏಳುತ್ತೇವೆ - ನಟ ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ

ಬೆಂಗಳೂರು| pavithra| Last Modified ಬುಧವಾರ, 6 ಜೂನ್ 2018 (14:14 IST)
ಬೆಂಗಳೂರು : ಕರ್ನಾಟಕದಲ್ಲಿ ರಜನೀಕಾಂತ್ ಅಭಿನಯದ ಕಾಲಾ ಚಿತ್ರದ ಬಿಡುಗಡೆಯ ವಿಚಾರಕ್ಕೆ
ಸಂಬಂಧಿಸಿದಂತೆ ಒಂದು ವೇಳೆ ಚಿತ್ರ ಪ್ರದರ್ಶನ ಮಾಡಿದರೆ ನಾವು ಧಂಗೆ ಏಳುತ್ತೇವೆ ಎಂದು ಹಿರಿಯ ನಟ
ಮುಖ್ಯಮಂತ್ರಿ ಚಂದ್ರು ಅವರು ಎಚ್ಚರಿಕೆ ನೀಡಿದ್ದಾರೆ
.


‘ನಾಡು, ನುಡಿ, ಗಡಿ ವಿಚಾರ ಬಂದಾಗ ನಾನು ಕಠಿಣ ಹೃದಯಿ. ಎಂತಹ ಸ್ನೇಹಿತರಾದರು ಕೂಡ ಅಂತಹವರ ವಿರುದ್ಧ ಧ್ವನಿ ಎತ್ತುತ್ತೇನೆ. ರಾಜ್ಯದ ಭಾಷೆಗೆ ಧಕ್ಕೆ ಬಂದರೆ ರಜನಿಕಾಂತ್ ಆಗಲಿ, ಕಮಲಹಾಸನ್ ಆಗಲಿ, ಪ್ರಕಾಶ್ ರೈಯನ್ನು ಧಿಕ್ಕರಿಸುತ್ತೇನೆ. ರಾಜ್ಯದ ಹಿತ ಮುಖ್ಯವಾದರೆ, ಪ್ರದರ್ಶಕರು ವಿತರಕರು ಈ ಸಿನಿಮಾ ತೆಗೆದುಕೊಳ್ಳಬಾರದು. ಈ ಚಿತ್ರ ತೆಗೆದುಕೊಂಡರೆ ಅನಾಹುತಕ್ಕೆ ತಯಾರಾಗಿ’ ಎಂದು ಮುಖ್ಯಮಂತ್ರಿ ಚಂದ್ರು ಅವರು ಎಚ್ಚರಿಕೆ ನೀಡಿದ್ದಾರೆ.


ಹಾಗೇ ಪ್ರಕಾಶ ರೈ ಬಗ್ಗೆ ಮಾತನಾಡುತ್ತಾ ಪ್ರಕಾಶ್ ರೈ ಬಾಯಿ ಬಚ್ಚಲು ಪ್ರಚಾರ ಗಿಟ್ಟಿಸಿಕೊಳ್ಳಲು ಸಂದರ್ಭಕ್ಕೆ ಅನುಗುಣವಾಗಿ ಮಾತನಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :