ಬೆಂಗಳೂರು : ಹಬ್ಬಕ್ಕೆ ಸಾಲು ಸಾಲು ರಜೆಗಳು ಇರುವುದರಿಂದ ಲಾಂಗ್ ವೀಕೆಂಡ್ನ ಖುಷಿಯಲ್ಲಿ ಇರುವ ಬೆಂಗಳೂರಿಗರಿಗೆ ಈ ವೀಕೆಂಡ್ನಿಂದ 1 ವಾರ ಪವರ್ ಕಟ್ ಸಮಸ್ಯೆ ಎದುರಾಗಲಿದೆ. ಇದೇ ಶನಿವಾರದಿಂದ ಅ. 22ರವರೆಗೂ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಮುಂದಿನ ವಾರ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಹೆಚ್ಎಸ್ಆರ್ ಲೇಔಟ್, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಜಂಬೂಸವಾರಿ ದಿಣ್ಣೆ ಸೇರಿ ಹಲವು ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.