ನವದೆಹಲಿ : ರಾಷ್ಟ್ರದಲ್ಲಿ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಪ್ರಯತ್ನದಲ್ಲಿ ಭಾರತವು ಈ ತಿಂಗಳ ಆರಂಭದಲ್ಲಿ ವಿದೇಶಕ್ಕೆ ಗೋಧಿ ರಫ್ತನ್ನು ನಿಷೇಧಿಸಿತು.ಆದರೆ ಭಾರತ ಗೋಧಿ ರಫ್ತು ಮೇಲಿನ ತನ್ನ ನಿಷೇಧವನ್ನು ಆದಷ್ಟು ಬೇಗ ಮರುಪರಿಶೀಲಿಸುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಅವರು ಭಾರತವನ್ನು ಒತ್ತಾಯಿಸಿದ್ದಾರೆ.ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಜಾರ್ಜಿವಾ, ರಫ್ತುಗಳನ್ನು ನಿರ್ಬಂಧಿಸುವುದು ಇತರ ರಾಷ್ಟ್ರಗಳನ್ನು ಅದೇ ರೀತಿ ಮಾಡಲು ಪ್ರೇರೇಪಿಸಬಹುದು. ಇದು ಜಾಗತಿಕ ಸಮುದಾಯವನ್ನು