ನವದೆಹಲಿ : ಉಕ್ರೇನ್ ವಿರುದ್ಧದ ರಷ್ಯಾ ಆಕ್ರಮಣವನ್ನು ಖಂಡಿಸುವ ಯುಎನ್ಎಸ್ಸಿ ನಿರ್ಣಯದಿಂದ ಭಾರತ ದೂರ ಉಳಿದಿದೆ.ರಷ್ಯಾ ವಿರುದ್ಧ 11 ರಾಷ್ಟ್ರಗಳು ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರೆ, ಭಾರತ ಸೇರಿ ಮೂರು ರಾಷ್ಟ್ರಗಳು ನಿರ್ಣಯದಿಂದ ದೂರ ಉಳಿದು ತಟಸ್ಥ ನೀತಿ ಅನುಸರಿಸಿವೆ.ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಭಾರತ, ಚೀನಾ, ಯುಎಇ ಈ ಮೂರು ರಾಷ್ಟ್ರಗಳು ಯುಎನ್ಎಸ್ಸಿ ನಿರ್ಣಯದಿಂದ ದೂರು ಉಳಿದಿವೆ. ಆದರೆ 11 ರಾಷ್ಟ್ರಗಳು ರಷ್ಯಾ ವಿರುದ್ಧ ಮತ ಚಲಾಯಿಸಿವೆ.