ಢಾಕಾ : ಬಾಂಗ್ಲಾದೇಶಕ್ಕೆ ಅತಿ ದೊಡ್ಡ ಧಾನ್ಯ ಪೂರೈಕೆದಾರ ಎಂದೇ ಹೆಸರಾಗಿರುವ ಭಾರತವು ಕಳೆದ ತಿಂಗಳಿಂದ ಗೋಧಿ ರಫ್ತನ್ನು ಸ್ಥಗಿತಗೊಳಿಸಿದೆ.ಪರಿಣಾಮವಾಗಿ ಬಾಂಗ್ಲಾದೇಶವು ಗೋಧಿ ಪೂರೈಕೆಗಾಗಿ ರಷ್ಯಾದೊಂದಿಗೆ ಒಪ್ಪಂದಕ್ಕೆ ಯತ್ನಿಸುತ್ತಿದೆ.ವಿಶ್ವದ ಅತಿದೊಡ್ಡ ಗೋಧಿ ರಫ್ತುದಾರ ರಷ್ಯಾದೊಂದಿಗಿನ ಪೂರೈಕೆ ಒಪ್ಪಂದವು ಢಾಕಾಗೆ ಜಾಗತಿಕ ಬೆಲೆಗಳಿಗಿಂತ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.ಒಪ್ಪಂದವನ್ನು ಅಂತಿಮಗೊಳಿಸಲು ಬಾಂಗ್ಲಾದೇಶವು ಗುರುವಾರ ರಷ್ಯಾದೊಂದಿಗೆ ವರ್ಚುವಲ್ ಸಭೆ ನಡೆಸಲಿದೆ ಎಂದು ಬಾಂಗ್ಲಾದೇಶದ ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು