ಯುದ್ಧಭೂಮಿಯಾಗಿರುವ ಉಕ್ರೇನ್ನಲ್ಲಿ ಸಿಲುಕಿರುವ ಭಾರತದ ನೆರೆಹೊರೆಯ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಜೆಗಳನ್ನು ಸ್ಥಳಾಂತರ ಮಾಡಿ ರಕ್ಷಿಸಲು, ಆ ರಾಷ್ಟ್ರಗಳಿಗೆ ನಾವು ಅಗತ್ಯ ಸಹಾಯ ಮಾಡಲಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಸಂಜೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಹೇಳಿದ್ದಾಗಿ ವರದಿಯಾಗಿದೆ. ಅಷ್ಟೇ ಅಲ್ಲ, ಉಕ್ರೇನ್ನಿಂದ ಭಾರತಕ್ಕೆ ಮಾನವೀಯ ನೆರವು ನೀಡಲಾಗುವುದು ಎಂದೂ ಪ್ರಧಾನಿ ಹೇಳಿದ್ದಾರೆ. ಅಷ್ಟೇ ಅಲ್ಲ, ಅವರು ಈಗಾಗಲೇ ರೊಮೇನಿಯಾದ ಪ್ರಧಾನಮಂತ್ರಿ ಎಚ್.ಇ.ನಿಕೋಲೇ-ಐಯೋನೆಲ್ ಸಿಯುಕಾ ಮತ್ತು ಸ್ಲೋವಕ್ ರಿಪಬ್ಲಿಕ್ ಪ್ರಧಾನಿ