ಶಿವಮೊಗ್ಗ : ನಗರದಲ್ಲಿ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ವೇಳೆ ರಾಷ್ಟ್ರೀಯ ಲಾಂಛನಕ್ಕೆ ಅಪಮಾನ ನಡೆದಿದೆ.ರಾಷ್ಟ್ರೀಯ ಲಾಂಚನದ ಮೇಲೆ ಹಿಂದೂ ಸಂಘಟನೆಗಳು ಕೇಸರಿ ಧ್ವಜ ಹಾರಿಸಿವೆ. ನಗರದ ಅಶೋಕ ರಸ್ತೆಯಲ್ಲಿರುವ ಅಶೋಕ ಸ್ಥಂಭವನ್ನೇ ಕೇಸರಿಮಯ ಮಾಡಲಾಗಿದೆ.ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಕೇಸರಿ ಧ್ವಜ ತೆರವು ಮಾಡಿದ್ದಾರೆ. ಈ ಮಧ್ಯೆ, ಬಿಗಿಭದ್ರತೆ ನಡುವೆ ಶೋಭಾ ಯಾತ್ರೆ ನಡೆಯಿತು. ಸಾವಿರಾರು ಮಂದಿ ಶೂಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.