ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜೋಶಿಮಠದಲ್ಲಿ ಆಗುತ್ತಿರುವ ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗುವ ಎಚ್ಚರಿಕೆಯನ್ನು ನೀಡಿದೆ. ಜೊತೆಗೆ ಉಪಗ್ರಹ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.ಇಸ್ರೋ ಬಿಡುಗಡೆಗೊಳಿಸಿರುವ ಚಿತ್ರಗಳನ್ನು ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ತೆಗೆಯಲಾಗಿದೆ. ಎನ್ಆರ್ಎಸ್ಸಿ ಮುಳುಗುತ್ತಿರುವ ಪ್ರದೇಶಗಳ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಸೇನೆಯ ಹೆಲಿಪ್ಯಾಡ್ ಮತ್ತು ನರಸಿಂಹ ದೇವಸ್ಥಾನ ಸೇರಿದಂತೆ ಇಡೀ ಪಟ್ಟಣವನ್ನು ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ.ಇಸ್ರೋದ ಪ್ರಾಥಮಿಕ ವರದಿಯ