ನವದೆಹಲಿ : ಮದುವೆ ನಂತರದ ಒತ್ತಡದ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಭಾವಿಸಬಹುದೆ? ಎಂಬ ವಿಚಾರದ ಕುರಿತಾಗಿ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಈ ಬಗ್ಗೆ ಹರಿಯಾಣ ಮೂಲದ ಎನ್ ಜಿಒ ಒಂದು ನ್ಯಾಯಾಲಕ್ಕೆ ಸಲ್ಲಿಸಿತ್ತು. ಇದೀಗ ಈ ಅರ್ಜಿಯ ವಿಚಾರಣೆ ಮಾಡಿದ ದೆಹಲಿ ಹೈಕೋರ್ಟ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.