ಬೆಂಗಳೂರು : ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಶುರುವಾದ ನಂತರ ಇದೀಗ ಸಚಿವ ಖಾತೆಗಾಗಿ ಪೈಪೋಟಿ ನಡೆಯುತ್ತಿದೆ. ಈ ಬಗ್ಗೆ ನಟ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪ ನಿವಾಸದ ಮುಂದೆ ಮಾತನಾಡಿದ ಜಗ್ಗೇಶ್ ಅವರು,ಎಲ್ಲರೂ ಮಾಡುವುದು ಅಧಿಕಾರಕ್ಕಾಗಿ. ಒಂದು ಸಿನೆಮಾ ಪ್ಲಾಫ್ ಮಾಡಲು 25 ಸಿನೆಮಾ ಬಿಡುತ್ತಾರೆ. ರಾಜಕೀಯವೂ ಹಾಗೆಯೇ. ಕುಮಾರಸ್ವಾಮಿ ಐದು ವರ್ಷ ಅಧಿಕಾರ ಮಾಡಲು ಖಂಡಿತ ಕಾಂಗ್ರೆಸ್ ಬಿಡಲ್ಲ. ಆಗಲೇ ಸಣ್ಣದಾಗಿ ಒಳಜಗಳ ಮೈತ್ರಿ ಸರ್ಕಾರದಲ್ಲಿ ಶುರುವಾಗಿದೆ.