ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಉಂಟಾಗಿರುವ ಬಿಕ್ಕಟ್ಟು ಜೆಡಿಎಸ್ ಪಕ್ಷಕ್ಕೂ ತಗಲಿದೆ. ಸಚಿವ ಸ್ಥಾನ ಸಿಗದ ಅಸಮಾಧಾನಿತರು ಒಂದೆಡೆಯಾದರೆ ಪ್ರಮುಖ ಖಾತೆಗಾಗಿ ಪಟ್ಟು ಹಿಡಿದು ನೂತನ ಸಚಿವರು ಸಿಎಂ ಕೈಗೂ ಸಿಗದೇ ಓಡಾಡುತ್ತಿದ್ದಾರೆ.ಇಂಧನ, ಹಣಕಾಸು, ಕಂದಾಯ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಜೆಡಿಎಸ್ ಈ ಪ್ರಮುಖ ಖಾತೆಗಳನ್ನು ದೇವೇಗೌಡರ ಕುಟುಂಬದವರಿಗೇ ನೀಡಿದ್ದಾರೆ ಎನ್ನುವುದು ನೂತನವಾಗಿ ಸಚಿವರಾಗಿ ಬಡ್ತಿ ಹೊಂದಿದ ಸಿಎಸ್ ಪುಟ್ಟರಾಜು, ಜಿಟಿ ದೇವೇಗೌಡ ಮುಂತಾದವರ