ನವದೆಹಲಿ : ಜಿಯೊ ಕಂಪನಿಯು ಸೋಮವಾರ ಬಿಡುಗಡೆ ಮಾಡಿರುವ ವಿಡಿಯೊದ ಪ್ರಕಾರ, ಜಿಯೊ ಪ್ಲಾಟ್ಫಾರಂ ಮತ್ತು ಗೂಗಲ್ ಕಂಪನಿ ಜೊತೆಗೂಡಿ ಜಿಯೊಫೋನ್ ನೆಕ್ಸ್ಟ್ಗೆ ಪ್ರಗತಿ ಒಎಸ್ ಅಭಿವೃದ್ಧಿಪಡಿಸಿವೆ. ದೀಪಾವಳಿಗೆ ವೇಳೆಗೆ ಈ ಫೋನ್ ಬಿಡುಗಡೆ ಆಗುವ ನಿರೀಕ್ಷೆ ಮಾಡಲಾಗಿದೆ. ಪ್ರಗತಿ ಓಎಸ್ ಆಂಡ್ರಾಯ್ಡ್ನಿಂದ ಚಾಲಿತವಾಗಿದೆ. ಜಿಯೋ ಮತ್ತು ಗೂಗಲ್ನಲ್ಲಿ ಇರುವ ಉತ್ತಮ ಮನಸ್ಸುಗಳನ್ನು ಒಟ್ಟುಗೂಡಿಸುವ ಉತ್ಸಾಹಭರಿತ ಪ್ರಯತ್ನದ ಫಲಿತಾಂಶ ಇದಾಗಿದೆ ಎಂದು ಆಂಡ್ರಾಯ್ಡ್ನ ಪ್ರಧಾನ ವ್ಯವಸ್ಥಾಪಕ ರಾಮ್ ಪಾಪಟ್ಲಾ ಹೇಳಿದ್ದಾರೆ.