ಗೋಲ್ಮಾಲ್ ಮಾಡಲು ಅನಿಲಭಾಗ್ಯ ಯೋಜನೆ ಜಾರಿಗೆ ತರಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ಸಂಸದ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಒಂದು ಕನೆಕ್ಷನ್ಗೆ 3700 ರೂಪಾಯಿ ಆಗುತ್ತದೆ. ರಾಜ್ಯ ಸರ್ಕಾರ 4500ರೂಪಾಯಿಗೆ ಗುತ್ತಿಗೆ ನೀಡಿದೆ. ಎಮ್ಎಸ್ಐಎಲ್ ಮೂಲಕ ಲಕ್ಷಾಂತರ ಸ್ಟೋವ್ ಖರೀದಿಸಲಾಗಿದೆ. ರಾಜ್ಯ ಸರ್ಕಾರದ್ದು ಅನಿಲ ಭಾಗ್ಯವಲ್ಲ ಲೂಟಿ ಭಾಗ್ಯ ಎಂದು ವ್ಯಂಗ್ಯವಾಡಿದ್ದಾರೆ. ಎಷ್ಟು ಹಣಕ್ಕೆ ಸ್ಟೋವ್ ಖರೀದಿ ಮಾಡಲಾಗಿದೆ? ಎಂಬುದನ್ನು ರಾಜ್ಯ ಸರ್ಕಾರ ಬಹಿರಂಗ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಜನರಿಗೆ ಸ್ಟೋವ್