ಚೆನ್ನೈ : ದೆಹಲಿಗೆ ತೆರಳಿ ಚುನಾವಣಾ ಆಯೋಗದಲ್ಲಿ ತಮ್ಮ ಹೊಸ ಮಕ್ಕಳ ನಿಧಿ ಪಕ್ಷ ವನ್ನು ರಿಜಿಸ್ಟರ್ ಮಾಡಿಸಿದ ತಮಿಳು ಚಿತ್ರರಂಗದ ಸ್ಟಾರ್ ನಟ ಕಮಲ್ ಹಾಸನ್ ಅವರು ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಿರುವುದಾಗಿ ತಿಳಿದುಬಂದಿದೆ. ಸುಮಾರು ೪೫ ನಿಮಿಷಗಳ ಕಾಲ ರಾಹುಲ್ ಗಾಂಧಿ ಅವರ ಜೊತೆ ಮಾತುಕತೆ ನಡೆಸಿದ ನಟ ಕಮಲ್ ಹಾಸನ್ ಅವರು ತಮಿಳುನಾಡಿನ ಸದ್ಯದ ಪರಿಸ್ಥಿತಿ ಮತ್ತು ರಾಜಕೀಯ ಚಿತ್ರಣದ ಬಗ್ಗೆ ಚರ್ಚಿಸಿರುವುದಾಗಿ