ವಿಜಯನಗರ : ಸತತ ಭಾರಿ ಮಳೆಯಿಂದಾಗಿ ತರಕಾರಿ ಬೆಳೆಗಳು ಹಾನಿಗೊಳಗಾಗಿದ್ದು ಮಾರುಕಟ್ಟೆಗೆ ತರಕಾರಿ ಆವಕ ಕುಸಿದಿದೆ. ರೈತರು ಬೆಳೆ ಹಾನಿಯಾಗಿ ಸಂಕಟದ ಉರುಳಿಗೆ ಸಿಲುಕಿದರೆ ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಮಾರುಕಟ್ಟೆಗಳಿಗೆ ತರಕಾರಿ ಬಾರದಿರುವುದರಿಂದ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲೂ ಟೊಮೇಟೊ, ಕ್ಯಾಪ್ಸಿಕಂ, ಬೀನ್ಸ್, ನುಗ್ಗೆಕಾಯಿ ಬೆಲೆ ದುಪ್ಪಟ್ಟಾಗಿದೆ. ಹೀಗಾಗಿ ದಿನ ನಿತ್ಯ ಅಡುಗೆಗೆ ತರಕಾರಿ ಖರೀದಿಸುವ ಜನರ ಜೇಬು ಖಾಲಿಯಾಗುತ್ತಿದೆ. ಒಂದು ವೇಳೆ ಮಾರುಕಟ್ಟೆಗೆ ಬಂದ