ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಮುಖ್ಯಮಂತ್ರಿಯಾಗಿ ಏನೋ ಕುಮಾರಸ್ವಾಮಿ ಆಯ್ಕೆಯಾದರು. ಆದರೆ ಪ್ರಮುಖ ಹಣಕಾಸು ಖಾತೆಗಾಗಿ ಇದೀಗ ಎರಡೂ ಪಕ್ಷದೊಳಗೆ ಫೈಟ್ ನಡೆಯುತ್ತಿದೆ.ಹಣಕಾಸು ಖಾತೆಗಾಗಿ ಮೂವರು ಪ್ರಮುಖರು ಕಣ್ಣಿಟ್ಟಿದ್ದು, ಇದರಲ್ಲಿ ಯಾರಿಗೆ ನೀಡಬೇಕು ಎಂಬ ಗೊಂದಲಕ್ಕೆ ಹೈಕಮಾಂಡ್ ತಲುಪಿದೆ.ಶಾಸಕರನ್ನು ಪಕ್ಷದ ಹಿಡಿತದಲ್ಲಿಟ್ಟುಕೊಳ್ಳಲು ಶ್ರಮಿಸಿದ ಡಿಕೆ ಶಿವಕುಮಾರ್ ಹಣಕಾಸು ಖಾತೆಗಾಗಿ ಬೇಡಿಕೆಯಿಡುತ್ತಿದ್ದಾರೆ. ಇನ್ನೊಂದೆಡೆ ನನಗೆ ಹಣಕಾಸು ಖಾತೆ ಕೊಟ್ಟರೆ ಪಕ್ಷಕ್ಕೆ ಬೇರೆ ಇಮೇಜ್ ತಂದುಕೊಡುತ್ತೇನೆಂದು ಪರಮೇಶ್ವರ್ ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಸಿಎಂ ಕುಮಾರಸ್ವಾಮಿ