ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ತಲೆನೋವು ಶಮನವಾಗಿದ್ದು, ಇದೀಗ ಪ್ರಮುಖ ನಾಯಕರು ತಮ್ಮ ಪಕ್ಷದ ನಾಯಕರಿಗೆ ಪ್ರಮುಖ ಖಾತೆಗಳಿಗಾಗಿ ಡಿಮ್ಯಾಂಡ್ ಮಾಡಲು ಶುರು ಮಾಡಿದ್ದಾರೆ.ನಿನ್ನೆ ಜೆಡಿಎಸ್ ವರಿಷ್ಠ ದೇವೇಗೌಡರ ಮನೆಯಲ್ಲಿ ಕಾಂಗ್ರೆಸ್ ನಾಯಕರು ಜತೆಗೂಡಿ ಸಭೆ ನಡೆಸಿದ್ದು, ಸಂಪುಟ ವಿಸ್ತರಣೆ ಸಂಕಟ ಬಗೆಹರಿಸಿದ್ದಾರೆ. ಹಣಕಾಸು, ನೀರಾವರಿ ಸೇರಿದಂತೆ ಪ್ರಮುಖ ಖಾತೆಗಳು ಜೆಡಿಎಸ್ ಪಾಲಾಗಿದೆ.ಆದರೆ ಇದೀಗ ಆಕಾಂಕ್ಷಿಗಳ ದಂಡು ತಮ್ಮ ತಮ್ಮ ಪಕ್ಷದ ನಾಯಕರ ಹಿಂದೆ ಬಿದ್ದಿದೆ.