ಬೆಂಗಳೂರು: ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಬಿಸ್ಕತ್ ವಿತರಿಸುವಾಗ ಎಸೆದ ಸಚಿವ ಎಚ್ ಡಿ ರೇವಣ್ಣ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಹಾಸನ ಹಾಲು ಒಕ್ಕೂಟದ ವತಿಯಿಂದ ನೀಡಲಾದ ಬಿಸ್ಕತ್ ಗಳನ್ನು ಸಚಿವರು ಸಂತ್ರಸ್ತರ ಕಡೆಗೆ ಎಸೆಯುವ ದೃಶ್ಯಗಳ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಜನ ಈಗ ಸಚಿವ ರೇವಣ್ಣಗೆ ಹಿಡಿಶಾಪ ಹಾಕುತ್ತಿದ್ದಾರೆ.ಒಬ್ಬ ಸಚಿವರಾಗಿ ಬಿಸ್ಕತ್ ಎಸೆಯುವ ದರ್ಪ ತೋರಿದ ಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟೀಕೆ ವ್ಯಕ್ತವಾಗುತ್ತಿದೆ.