ಬೆಂಗಳೂರು: ಮೈತ್ರಿ ಸರ್ಕಾರದ ಕೆಲವು ಶಾಸಕರು ಬಂಡಾಯವೆದ್ದು, ಸರ್ಕಾರ ಉರುಳಿಸಲು ಸಂಚು ನಡೆಸಿದ್ದಾರೆಂಬ ಗುಮಾನಿ ಹಿನ್ನಲೆಯಲ್ಲಿ ಸಚಿವರು, ಶಾಸಕರ ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂಬ ಭಯ ಶುರುವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನ ಕೆಲವು ಪ್ರಮುಖ ಶಾಸಕರ ಫೋನ್ ಟ್ಯಾಪಿಂಗ್ ಕಳೆದ ಒಂದು ವಾರದಿಂದ ನಡೆಯುತ್ತಿದ್ದು, ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ವಿಶೇಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಪ್ತರ ದೂರವಾಣಿ