ಕಾಂಗ್ರೆಸ್ ಸಚಿವರು ರಾಜಕೀಯ ಮಾತಾಡೋ ಹಾಗಿಲ್ಲ! ಕೆಸಿ ವೇಣುಗೋಪಾಲ್ ತಾಕೀತು

ಬೆಂಗಳೂರು| Krishnaveni K| Last Modified ಸೋಮವಾರ, 2 ಜುಲೈ 2018 (09:26 IST)
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ತನ್ನ ಸಚಿವರಿಗೆ ಖಡಕ್ ಸೂಚನೆಯೊಂದನ್ನು ರವಾನಿಸಿದೆ. ಇನ್ಮುಂದೆ ಸಚಿವರು ಬಹಿರಂಗವಾಗಿ ರಾಜಕೀಯ ವಿಚಾರಗಳ ಬಗ್ಗೆ ಹೇಳಿಕೆ ಕೊಡುವಂತಿಲ್ಲ ಎಂದು ಖಡಕ್ ಸೂಚನೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ನೀಡಿದ್ದಾರೆ.


ಬಜೆಟ್ ಮಂಡನೆ ವಿಚಾರದಲ್ಲಿ ಸಿದ್ದರಾಮಯ್ಯ ನೀಡಿದ್ದಾರೆಂಬ ಹೇಳಿಕೆಯ ವಿಡಿಯೋ ವೈರಲ್ ಆದ ಮೇಲೆ ನಡೆದ ವಿದ್ಯಮಾನಗಳ ನಂತರ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ತನ್ನ ಸಚಿವರಿಗೆ ಇಂತಹದ್ದೊಂದು ಖಡಕ್ ಸಂದೇಶ ರವಾನಿಸಿದೆ.


‘ಸಚಿವರುಗಳು ತಮ್ಮ ಇಲಾಖೆಯ ಯೋಜನೆಗಳ ಕುರಿತು, ಸಾರ್ವಜನಿಕವಾಗಿ ಮಾತನಾಡಿದರೆ ಸಾಕು. ಅದರ ಹೊರತಾಗಿ ರಾಜಕೀಯ ವಿಚಾರವಾಗಿ ಬಹಿರಂಗ ಹೇಳಿಕೆ ಕೊಡಬಾರದು’ ಎಂದು ಸಮನ್ವಯ ಸಮಿತಿ ಸಭೆ ನಂತರ ಹೇಳಿದ್ದಾರೆ.


ಇನ್ಮುಂದೆ ಸಮ್ಮಿಶ್ರ ಸರ್ಕಾರದ ಮಾಹಿತಿ ನೀಡಲು ಎರಡೂ ಪಕ್ಷಗಳ ಪರವಾಗಿ ಇಬ್ಬರು ವಕ್ತಾರರನ್ನು ನೇಮಿಸಲಾಗುವುದು. ಅವರೇ ಎಲ್ಲಾ ಅಧಿಕೃತ ಹೇಳಿಕೆ ನೀಡುತ್ತಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :