‘ದಯವಿಟ್ಟು ಪ್ರಧಾನಿ ಮೋದಿಗೆ ಹೇಳಿ..’ ಎನ್ನುತ್ತಾ ಕಣ್ಣೀರು ಹಾಕಿದ ಕೇರಳ ಶಾಸಕ

ತಿರುವನಂತಪುರಂ| Krishnaveni K| Last Modified ಭಾನುವಾರ, 19 ಆಗಸ್ಟ್ 2018 (09:03 IST)
ತಿರುವನಂತಪುರಂ: ಕೇರಳದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಜನ ಜೀವನ ತೀರಾ ಹದಗೆಟ್ಟಿದೆ. ಜನರು ಸುರಕ್ಷಿತ ಸ್ಥಳಗಳಿಗೆ ಹೋಗಲು ಪರದಾಡುತ್ತಿರುವಾಗ ಶಾಸಕರೊಬ್ಬರೇ ಟಿವಿ ಎದುರು ಕಣ್ಣೀರು ಹಾಕಿದ ಘಟನೆ ನಡೆದಿದೆ.

ಚೆಂಗನ್ನೂರು ಶಾಸಕ ಸಾಜಿ ಚೆರಿಯನ್
ತಮ್ಮ ಕ್ಷೇತ್ರದಲ್ಲಿ ಜನರ ಅವಸ್ಥೆ ಕಂಡು ದುಃಖ ತಡೆಯಲಾಗದೇ ಟಿವಿ ಕ್ಯಾಮರಾ ಎದುರು ‘ದಯವಿಟ್ಟು ಪ್ರಧಾನಿ ಮೋದಿಗೆ ಯಾರಾದರೂ ಇಲ್ಲಿಗೆ ಹೆಲಿಕಾಪ್ಟರ್ ಕಳುಹಿಸಿಕೊಡಲು ಹೇಳಿ.. ಇಲ್ಲವಾದರೆ ಇಲ್ಲಿನ ಜನ ಸಾಯ್ತಾರೆ’ ಎಂದು ಕಣ್ಣೀರು ಹಾಕಿದ್ದಾರೆ.


‘ನಮ್ಮ ಜನರ ಬಳಿ ಸಣ್ಣ ಪುಟ್ಟ ದೋಣಿ, ತೆಪ್ಪಗಳಿವೆ. ಇಲ್ಲಿ ನೀರು ಭಾರೀ ರಭಸವಾಗಿ ಹರಿಯುತ್ತಿದ್ದು, ತೆಪ್ಪಗಳ ಮೇಲೆ ಕುಳಿತು ಸುರಕ್ಷಿತ ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲ. ನಮಗೆ ಹೆಲಿಕಾಪ್ಟರ್ ಕಳುಹಿಸಿಕೊಡಿ ‘ ಎಂದು ಶಾಸಕ ಚೆರಿಯನ್ ಅಲವತ್ತುಗೈದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :