ಕೊಚ್ಚಿ: ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಇಲ್ಲಿನ ಪ್ರಮುಖ ವಿಮಾನ ನಿಲ್ದಾಣಕ್ಕೂ ನೀರು ನುಗ್ಗಿದೆ. ಭಾರೀ ಮಳೆಯಿಂದಾಗಿ ವಿಮಾನ ನಿಲ್ದಾಣ ನಾಲ್ಕು ದಿನಗಳವರೆಗೆ ಬಂದ್ ಆಗಲಿದೆ.ಮುಂದಿನ ನಾಲ್ಕು ದಿನಗಳವರೆಗೆ ವಿಮಾನ ಸಂಚಾರವೂ ರದ್ದಾಗಿದೆ. ಮಳೆಯಿಂದಾಗಿ ಕೇರಳದಲ್ಲಿ ಸಾವನ್ನಪ್ಪಿದವರ ಸಂಖ್ಯೆ 67 ಕ್ಕೇರಿದ್ದು, ಇನ್ನೂ ಭಾರೀ ಮಳೆಯಾಗುತ್ತಿರುವುದರಿಂದ ಸಾವು ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ನೆರೆಯ ವಾತಾವರಣವಿದ್ದು, ವಿಮಾನ ನಿಲ್ದಾಣ ಈ ರೀತಿ ನಾಲ್ಕು ದಿನಗಳವರೆಗೆ ಬಂದ್