ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,59,632 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇದು ನಿನ್ನೆಯ ಪ್ರಕರಣಗಳಿಗಿಂತ ಶೇ.12.4 ರಷ್ಟು ಹೆಚ್ಚಾಗಿದೆ ಎಂದು ಭಾನುವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ವರದಿ ತಿಳಿಸಿದೆ.ಅತೀ ಹೆಚ್ಚು ಕೋವಿಡ್ ಕೇಸ್ಗಳು ಮಹಾರಾಷ್ಟ್ರದಲ್ಲಿ ವರದಿಯಾಗಿವೆ. 41,434 ಕೇಸ್ಗಳು ಮಹಾರಾಷ್ಟ್ರದಲ್ಲಿ, ದೆಹಲಿ – 20,181, ಪಶ್ಚಿಮ ಬಂಗಾಳ – 18,802, ತಮಿಳುನಾಡು – 10,978, ಕರ್ನಾಟಕ – 8,906 ಪ್ರಕರಣಗಳು ದಾಖಲಾಗಿವೆ.