ಬೆಂಗಳೂರು : ಕೋವಿಡ್ ಸೋಂಕನ್ನು ಲಸಿಕೆಯ ಬದಲಿಗೆ ಮಾತ್ರೆಗಳ ಮೂಲಕ ಹತೋಟಿಗೆ ತರುವ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಪ್ಯಾಕ್ಸ್ಲೋವಿಡ್ ಹಾಗೂ ಮೊಲ್ನುಪೆರಾವಿರ್ ಎನ್ನುವ ಎರಡು ಮಾತ್ರೆಗಳ ಪ್ರಯೋಗ ಹಲವು ದೇಶಗಳಲ್ಲಿ ನಡೆಯುತ್ತಿದೆ. ಮುಂದಿನ ಆರು ತಿಂಗಳೊಳಗೆ ಈ ಎರಡು ಮಾತ್ರೆಗಳು ದೇಶದಲ್ಲಿ ಲಭ್ಯವಾಗುವ ಸಾಧ್ಯತೆ ಇದ್ದು, ಈಗಾಗಲೇ ಅಮೆರಿಕ ಮತ್ತು ಇಂಗ್ಲೆಂಡ್ ಎರಡು ಮತ್ತು ಮೂರನೇ ಹಂತದ ಪರೀಕ್ಷೆಗಳನ್ನು ನಡೆಸಿವೆ. ಫೈಜರ್ ಕಂಪನಿಯು ಪ್ಯಾಕ್ಸ್ಲೋವಿಡ್ ಎನ್ನುವ ಮಾತ್ರೆಗೆ ಪೇಟೆಂಟ್ ಪಡೆದಿದೆ.