ಜಾಗತಿಕ ಮಟ್ಟದಲ್ಲಿ ಆವರಿಸಿರುವ ವಿದ್ಯುತ್ ಕೊರತೆ, ಈ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿದೆ. ಭಾರತ, ಚೀನಾದಂಥ ಅಭಿವೃದ್ಧಿಶೀಲ ರಾಷ್ಟ್ರಗಳು ಮಾತ್ರವಲ್ಲ ಅಮೆರಿಕ, ಯು.ಕೆ.ಯಂಥ ಅಭಿವೃದ್ಧಿಗೊಂಡ ರಾಷ್ಟ್ರಗಳಿಗೂ ಇದು ದೊಡ್ಡ ಕೊರತೆಯಾಗಿ ಕಾಡುತ್ತಿದೆ.ಮೂಲಕಾರಣವೇನು? ಕೋವಿಡ್ ಕಾರಣದಿಂದಾಗಿ, ಕಚ್ಚಾ ತೈಲ ಹಾಗೂ ಇತರ ಇಂಧನ ಮೂಲಗಳಿಗೆ ಇದ್ದ ಬೇಡಿಕೆ ಜಾಗತಿಕ ಮಟ್ಟದಲ್ಲಿ ಅಗಾಧವಾಗಿ ಕುಸಿಯಿತು. ಈಗ ಜಾಗತಿಕ ಉತ್ಪಾದನಾ ಕ್ಷೇತ್ರ ಪುಟಿದೆದ್ದಿರುವ ಹಿನ್ನೆಲೆಯಲ್ಲಿ, ಈ ಬೇಡಿಕೆ ಹಿಂದೆ ಇದ್ದ ಬೇಡಿಕೆಗಿಂತ ಹತ್ತಾರು ಪಟ್ಟು ಹೆಚ್ಚಾಗಿದೆ.