ಬೆಳಗಾವಿ: ಕಾಂಗ್ರೆಸ್ನ ಲಕ್ಷ್ಮಿ ಹೆಬ್ಬಾಳ್ಕರ್ ಭಾವಚಿತ್ರ ಇರುವ ಕುಕ್ಕರ್ ತುಂಬಿದ ಲಾರಿಯೊಂದನ್ನು ಇಂದು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನೀತಿ ಸಂಹಿತೆ ಜಾರಿಯಾದ ನಾಲ್ಕು ದಿನದ ನಂತರ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಆಕಾಂಕ್ಷಿ ಲಕ್ಷ್ಮಿ ಹೆಬ್ಬಾಳ್ಕರ್ ಭಾವಚಿತ್ರ ಇರುವ ಕುಕ್ಕರ್ ಬಾಕ್ಸ್ಗಳ ವಾಹನ ಡಿಸಿ ಬಂಗ್ಲೆ ಎದುರು ಪತ್ತೆಯಾಗಿತ್ತು.