ಭಾರತಾದ್ಯಂತ ಸಾವಿರಾರು ಜನರು ಸಹಜ ಸಮಾಧಿಯ ಧ್ಯಾನದ ರೀತಿಯನ್ನು ಗುರುದೇವ್ ಶ್ರೀ ಶ್ರೀ ರವಿಶಂಕರರ ಸಹೋದರಿಯಾದ, ಗುರುದೇವರ ಬಗ್ಗೆ ಬರೆದಿರುವ ಪುಸ್ತಕದ ಲೇಖಕಿಯಾದ ಶ್ರೀಮತಿ ಭಾನುಮತಿ ನರಸಿಂಹನ್ರವರಿಂದ, ಮೇ 4 ರಿಂದ 6ನೆಯ ತಾರೀಖಿನಂದು ಕಲಿಯಲಿದ್ದಾರೆ. 3,000ಕ್ಕಿಂತಲೂ ಹೆಚ್ಚು ವೈಜ್ಞಾನಿಕ ಪತ್ರಗಳು ಧ್ಯಾನದಿಂದ ಉಂಟಾಗುವ ಲಾಭಗಳ ಬಗ್ಗೆ ತಿಳಿಸಿದ್ದು, ಈ ವಿಷಯ ಈಗ ಸಾಮಾನ್ಯ ಜ್ಞಾನವಾಗಿದೆ. ಸಹಜ ಸಮಾಧಿಯ ಲಾಭಗಳೆಂದರೆ ಸ್ಪಷ್ಟವಾದ ತಿಳಿವಳಿಕೆ, ಹೆಚ್ಚಿನ ಶಕ್ತಿ, ಉತ್ತಮ ದೈಹಿಕ ಆರೋಗ್ಯ,