ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಾದ್ಯಂತ ಇಂದು ಧಾರಾಕಾರ ಮಳೆಯಾಗುತ್ತಿದೆ.ಮಳೆಯಿಂದಾಗಿ ಕಾರವಾರ ನಗರ ಮತ್ತು ಸುತ್ತಮುತ್ತ ಹಲವು ರಸ್ತೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಕಾರವಾರ ನಗದ ಹಬ್ಬುವಾಡದಲ್ಲಿ ಹೈಚರ್ಚ್ ರಸ್ತೆ, ನಂದನಗದ್ದಾ, ರೈಲು ನಿಲ್ದಾಣ ರಸ್ತೆ ಸೇರಿದಂತೆ ಹಲವೆಡೆ ಚರಂಡಿಯಿಂದ ಮಳೆ ನೀರು ಉಕ್ಕಿ ಹರಿದಿದೆ. ರಸ್ತೆಯಲ್ಲಿ ಉಕ್ಕಿ ಹರಿದ ನೀರಿನಿಂದಾಗಿ ವಾಹನ ಸವಾರರು ಪರದಾಡುವಂತಾಗಿದ್ದು, ನಗರದ ರೈಲ್ವೆ ನಿಲ್ದಾಣರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಜಿಲ್ಲೆಯಲ್ಲಿ ಇದೇ ತಿಂಗಳು 25ರ ವರೆಗೆ