ಕ್ಯಾನ್ಬೆರಾ : ಆಕಾಶದಲ್ಲಿ ಇಲ್ಲಿಯವರೆಗೆ ಎಂದಿಗೂ ಕಾಣಿಸಿಕೊಳ್ಳದ ವಿಚಿತ್ರ ವಸ್ತುವೊಂದನ್ನು ಮಿಲ್ಕಿ ವೇ(ಕ್ಷೀರಪಥ) ಗ್ಯಾಲಕ್ಸಿಯಲ್ಲಿ ಪತ್ತೆ ಹಚ್ಚಲಾಗಿದೆ. 18.18 ನಿಮಿಷಗಳಿಗೊಮ್ಮೆ ಸ್ಫೋಟಿಸುವ ಈ ಹೊಸ ವಸ್ತು ವಿಜ್ಞಾನ ಲೋಕಕ್ಕೆ ಹೊಸ ಸವಾಲಾಗಿದೆ.ಪಶ್ಚಿಮ ಆಸ್ಟ್ರೇಲಿಯಾದ ಹೊರವಲಯದಲ್ಲಿರುವ ಮರ್ಚಿಸನ್ ವೈಡ್ಫೀಲ್ಡ್ ಅರೇ ಪ್ರಾಜೆಕ್ಟ್ ಅಡಿ ತಯಾರಾದ ದೂರದರ್ಶಕವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮೊದಲ ಬಾರಿಗೆ ಈ ವಿಚಿತ್ರ ವಸ್ತುವನ್ನು ಕಂಡುಹಿಡಿದಿದ್ದರು. ಈಗ ಪ್ರತಿ ಗಂಟೆಗೆ 3 ಬಾರಿ ದೊಡ್ಡ ಮಟ್ಟದ ಸ್ಫೋಟವನ್ನು ಬಿಡುಗಡೆ ಮಾಡುವ