ನವದೆಹಲಿ : ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಆಗಸ್ಟ್ 1 ರಿಂದ 36 ರೂ. ಕಡಿತಗೊಳಿಸಲಾಗಿದೆ.ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು(ಒಎಂಎಸ್) 19 ಕೆ.ಜಿ ಯ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 36 ರೂ.ಗಳಷ್ಟು ಕಡಿಮೆಗೊಳಿಸಿದೆ.ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆಯಿಂದಾಗಿ ದೆಹಲಿಯಲ್ಲಿ 2,012.50 ರೂ. ಇದ್ದ ಪ್ರತೀ ಸಿಲಿಂಡರ್ಗಳ ಬೆಲೆ 1,976.50 ರೂ.ಗೆ ಇಳಿಕೆಯಾಗಿದೆ. ಇದು ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಆಗಲಿದೆ.ಬೆಂಗಳೂರಿನಲ್ಲಿ