ತಿರುವನಂತಪುರಂ: ಕೇರಳದಲ್ಲಿ ಪ್ರವಾಹದಿಂದಾಗಿ ಜನ ದೈನಂದಿನ ಬದುಕು ಸವೆಸುವುದೂ ಕಷ್ಟವಾಗಿದೆ. ಅಂತಹದ್ದರಲ್ಲಿ ನವ ಜೋಡಿಯೊಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ!ಮಲಪ್ಪುರಂನ ಅಂಜು ಮತ್ತು ಸಾಜು ಎಂಬ ಜೋಡಿ ನಿರಾಶ್ರಿತರ ಕೇಂದ್ರದಲ್ಲಿರುವಾಗಲೇ ಹಸೆಮಣೆಗೆ ಏರಿದೆ. ಅದೂ ಸಮೀಪದ ದೇವಾಲಯವೊಂದರಲ್ಲಿ. ಆ ಮದುವೆಗೆ ನಿರಾಶ್ರಿತರ ಕೇಂದ್ರದಲ್ಲಿದ್ದವರೇ ಬಂಧುಗಳಾಗಿ ಸಾಕ್ಷಿಯಾದರು.ಮೂರು ದಿನಗಳಿಂದ ಈ ಜೋಡಿ ಇಲ್ಲಿನ ಶಾಲೆಯೊಂದರಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು. ಮಳೆಯಿಂದಾಗಿ ಮದುವೆ ಮುಂದೂಡುವ ಯೋಚನೆಯಲ್ಲಿದ್ದ ಜೋಡಿಗೆ ನಿರಾಶ್ರಿತರ ಕೇಂದ್ರದಲ್ಲಿದ್ದ ಸದಸ್ಯರ ಉತ್ತೇಜನ