ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ವಿಸ್ತರಣೆಯಿಂದ ಶುರುವಾದ ಅಸಮಾಧಾನ ತಾರಕಕ್ಕೇರಿದ್ದು, ಡಿಸಿಎಂ ಖಾತೆಗೆ ಪಟ್ಟು ಹಿಡಿದಿರುವ ಮಾಜಿ ಸಚಿವ ಎಂಬಿ ಪಾಟೀಲ್ ಬಂಡಾಯದ ಎಚ್ಚರಿಕೆ ನೀಡಿದ್ದಾರೆ.ನನ್ನ ಜತೆ 20 ಶಾಸಕರಿದ್ದಾರೆ ಎಂದು ಹೈಕಮಾಂಡ್ ಗೆ ಪಾಟೀಲ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ನಿನ್ನೆಯಷ್ಟೇ ಸಿಎಂ ಕುಮಾರಸ್ವಾಮಿ ಪಾಟೀಲ್ ಜತೆಗೆ ಮಾತುಕತೆ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಹೈಕಮಾಂಡ್ ಪಾಟೀಲ್ ಗೆ ಬುಲಾವ್ ನೀಡಿದೆ.ಅತೃಪ್ತರಿಗೆ ಎಂಬಿ ಪಾಟೀಲ್ ನೇತೃತ್ವ ವಹಿಸಿದ್ದಾರೆ.