ಬೆಂಗಳೂರು : ಕಾಮುಕನೊಬ್ಬ ಬೆಂಗಳೂರಿನ ಲೇಡಿಸ್ ಪಿಜಿಯೊಂದಕ್ಕೆ ಮಧ್ಯರಾತ್ರಿಯಲ್ಲಿ ನುಗ್ಗಿ ಮಲಗಿದ್ದ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಶಾಂತಿನಗರದ ಬಿಟಿಎಸ್ ರಸ್ತೆಯಲ್ಲಿರುವ ಪಿಜಿಯೊಂದಕ್ಕೆ ಮಧ್ಯರಾತ್ರಿಯಲ್ಲಿ ಕಾಮುಕನೊಬ್ಬ ನುಗ್ಗಿದ್ದಾನೆ. ಆಗ ಅಲ್ಲಿ ನಿದ್ದೆ ಮಾಡುತ್ತಿದ್ದ ಯುವತಿಯರ ಅಂಗಾಂಗ ಮುಟ್ಟುವುದಲ್ಲದೆ, ಅಪ್ಪಿಕೊಂಡು ದೌರ್ಜನ್ಯ ಎಸಗಿದ್ದಾನೆ. ಆಗ ಆತಂಕಗೊಂಡ ಯುವತಿಯರು ಕಿರುಚಾಡಿದಾಗ ಕಾಮುಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಯುವತಿಯರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.